Guruji Photo
Guruji Mobile View
Guruji Left

ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ (ರಿ) ಬೆಂಗಳೂರು

ಸಿದ್ಧ ಸಮಾಧಿ ಯೋಗ

ಮೌನದ ವಿಜ್ಞಾನ – ಸುಲಭವಾದ ಸಂತೋಷಮಯ ಜೀವನದ ದಾರಿ

ಗುರುಜಿ ಋಷಿ ಪ್ರಭಾಕರ್ ಅವರ ಕೃಪೆ ಮತ್ತು ಆಶೀರ್ವಾದದಿಂದ

Guruji Right

ಸಿದ್ಧ ಸಮಾಧಿ ಯೋಗದ ಬಗ್ಗೆ

SSY Kannada Logo

ಜೈ ಗುರುದೇವ

ಯೋಗ ಬ್ರಹ್ಮ ಋಷಿ ಪ್ರಭಾಕರ ಗುರೂಜಿಯವರು ತಮ್ಮ ಇಂಜಿನಿಯರಿಂಗ ಪದವಿಯನ್ನು ಬೆಂಗಳೂರಿನಲ್ಲಿ ಪಡೆದುಕೊಂಡು, ತಮ್ಮ ಉನ್ನತ ವ್ಯಾಸಂಗವನ್ನು ಕೆನಡಾ ದೇಶದ ಒಟ್ಟಾವಾ ವಿಶ್ವವಿದ್ಯಾಲಯದಲ್ಲಿ ಎಮ್ ಇ ಪದವಿಯನ್ನು ಎರೋನಾಟೆಕಲ್ ಇಂಜಿನಿಯರಿಂಗನಲ್ಲಿ ಪಡೆದುಕೊಂಡರು. ನಂತರ ಆಡಳೀತ ಶಾಸ್ತ್ರದಲ್ಲಿ (ಎಮ್.ಬಿ.ಎ) ಪದವಿಯನ್ನು ವೇಸ್ಟರ್ನ ಒಂಟಾರಿಯೊ ಯುನಿವರ್ಸಿಟಿಯಲ್ಲಿ ಪಡೆದುಕೊಂಡರು. ಅಲ್ಲಿಯೇ ಆ ದೇಶದ ನಾಗರಿಕರಾಗಿ ಒಟ್ಟಾವಾ ನಗರದಲ್ಲಿ ಈ ವಿಷಯಗಳ ಪರಿಣಿತ ಸಲಹೆಗಾರರಾಗಿ ವೃತ್ತಿಯನ್ನು ಮಾಡಿಕೊಂಡಿದ್ದರು. ಆಗಲಿ ಅವರಿಗೆ ಭಾರತೀಯ ಆತ್ಮ ಜ್ಞಾನದ ಪರಂಪರೆಯತ್ತ ಗಮನ ಹರಿದಿದ್ದು, 1975 ರ ಸುಮಾರಿಗೆ ಭಾರತಕ್ಕೆ ಮರಳಿ ಬಂದು ಪ್ರಾಚೀನ ಯೋಗ ಹಾಗೂ ಧ್ಯಾನ ಪದ್ಧತಿಯನ್ನು ಅಭ್ಯಸಿಸಿದರು. ಸಿದ್ಧ ಧ್ಯಾನಿಗಳ ಸಾನಿಧ್ಯ ಪಡೆದು, ವೇದಾಂತ ಉಪನಿಷತ್ತುಗಳನ್ನು ಓದಿ, ಮಹಾತ್ಮರ ಗೃಂಥಗಳನ್ನು, ಜೀವನ ದರ್ಶನಗಳನ್ನು ಪರಿಚಯಿಸಿಕೊಂಡು ಒಂದು ರೀತಿಯಲ್ಲಿ ಸಂಶೋಧನೆಯನ್ನು ನಡೆಸಿದರು. ಯೋಗ ಬೃಹ್ಮ ಋಷಿ ಪ್ರಭಾಕರ ಗುರೂಜಿಯವರು ಧ್ಯಾನ ಯೋಗದಲ್ಲಿ ಹೊಸ ಅವಿಷ್ಕಾರವನ್ನೇ ಮಾಡಿದರು, ಅದುವೇ “ಸಿದ್ಧ ಸಮಾಧಿ ಯೋಗ” ಮಕ್ಕಳಿಂದ ವೃದ್ಧರ ವರೆಗೆ, ಪಾಮರರಿಂದ ಪಂಡೀತರವರೆಗೆ, ಅಶಕ್ತರಿಂದ ಶಕ್ತರವರೆಗೆ ಎಲ್ಲರೂ ಈ ಯೋಗವನ್ನು ಅನುಸರಿಸಬಹುದು. ಇದರ ನಿತ್ಯ ಅನುಸಂಧಾನದಿಂದ ಜೀವನದ ಎಲ್ಲ ರಂಗದಲ್ಲೂ ಪರಿಪೂರ್ಣತೆ ಸಾಧ್ಯ ಸಿದ್ಧ ಸಮಾಧಿ ಯೋಗವು ಮುಖ್ಯವಾಗಿ ವ್ಯಕ್ತಿಯಲ್ಲಿ ಆತ್ಮ ವಿಶ್ವಾಸವನ್ನು ಮನುರುಜ್ಜಿವನಗೊಳಿಸುತ್ತದೆ, ಅವನಲ್ಲಿ ಇದುವರೆಗೆ ಅಗೋಚರವಾಗಿದ್ದ ಮಹಾಶಕ್ತಿಯನ್ನು ಉದ್ದೀಪನಗೊಳಿಸುತ್ತದೆ, ಜಗತ್ತಿನ ಆಗು ಹೋಗುಗಳಿಗೆ ತಾನೂ ಜವಾಬ್ದಾರ ಎನ್ನುವ ಪ್ರಜ್ಞೆಯನ್ನು ಮೂಡಿಸಿ ಅವನ ನಡೆ ನುಡಿಯಲ್ಲಿ ಸಂಯಮ ಹಾಗೂ ಹೊಣೆಗಾರಿಕೆಯನ್ನು ತರುತ್ತದೆ. ಸಿದ್ಧ ಸಮಾಧಿ ಯೋಗವು ಎರಡು ವಿಭಾಗಗಳನ್ನು ಒಳಗೋಡಿದೆ, 1. ಪ್ರಾಣಾಯಾಮ, 2, ಧ್ಯಾನ. ಸುಮಾರು 30 ನಿಮಿಷಗಳ ಪ್ರಾಣಾಯಾಮವು ದೈಹಿಕ ಸ್ವಾಸ್ಥ್ಯವನ್ನು ರೂಪಿಸಿದರೆ, ಸುಮಾರು 15 ನಿಮಿಷಗಳ ಧ್ಯಾನವು ಮಾನಸಿಕ ಸ್ವಾಸ್ಥ್ಯವನ್ನು ರೂಪಿಸುತ್ತದೆ. ದಿನಕ್ಕೆ 3 ತಾಸುಗಳಂತೆ 15 ದಿನಗಳ ಕಾಲ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಸಾಧಕರು ಇವುಗಳ ತರಬೇತಿ ನೀಡುವರು. ಋಷಿ ಪ್ರಭಾಕರ ಗುರೂಜಿಯವರು “ತಮ್ಮ ಜೀವನದ ಕೊನೆವರೆಗೆ ಸಿದ್ಧ ಸಮಾಧಿ ಯೋಗ ಜ್ಞಾನದ ಪ್ರಸಾರವನ್ನು ಮಾಡಿದರು. ಭಾರತದ ಎಲ್ಲ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಶಾಖೆಗಳು ಸೇವೆ ಮಾಡುತ್ತವೆ.

ಜೈ ಗುರುದೇವ

ಶ್ರೀ ಗುರುವಾಣಿ

ಗುರುವಾಣಿ ಪೋಸ್ಟರ್

ನಿಜವಾದ ಅರ್ಥದಲ್ಲಿ ಭಕ್ತಿ, ಶರಣಾಗತಿ ಎಂದರೆ ಏನು ?
ಎಲ್ಲವೂ ಸರಿ ಎಂದು ಅರಿಯುವುದು ನಿಜವಾದ ಶರಣಾಗತಿ ಅಲ್ಲವೇ ?
ದೇವರು ಎಲ್ಲೆಡೆ ಇದ್ದಾನೆ, ಎಲ್ಲವನ್ನೂ ಅವನು ನೋಡಿಕೊಳ್ಳುತ್ತಿದ್ದಾನೆ ಎಂದು ಅರಿಯುವುದು ನಿಜವಾದ ಭಕ್ತಿ,
ಎಲ್ಲವನ್ನೂ ದೇವರು ಸರಿಯಾಗಿಟ್ಟಿದ್ದಾನೆ ಎಂದು ತಿಳಿಯುವುದು ನಿಜವಾದ ಭಕ್ತಿ.
“ಎಲ್ಲವೂ ಸರಿ" ಎಂದು ತಿಳಿಯುವುದು ದೇವರಿಗೆ ನಾವು ತೋರಿಸಬಹುದಾದ ಅತಿ ದೊಡ್ಡ ಗೌರವ.
ಇದನ್ನು ಅರಿತು ಜೀವಿಸಿದಾಗ ನಿಮ್ಮ ಜೀವನದಲ್ಲಿ ಪವಾಡಗಳು ಜರುಗಲು ಪ್ರಾರಂಭವಾಗುತ್ತವೆ.

ಗುರುವಾಣಿ ಪೋಸ್ಟರ್
ಗುರುವಾಣಿ ಪೋಸ್ಟರ್
ಗುರುವಾಣಿ ಪೋಸ್ಟರ್
ಗುರುವಾಣಿ ಪೋಸ್ಟರ್
ಗುರುವಾಣಿ ಪೋಸ್ಟರ್
ಗುರುವಾಣಿ ಪೋಸ್ಟರ್
ಗುರುವಾಣಿ ಪೋಸ್ಟರ್
ಗುರುವಾಣಿ ಪೋಸ್ಟರ್

ಗುರುಜಿಯ ಹಿತ ನುಡಿಗಳು

Guruji Photo 1

Guruji Photo 2

Guruji Photo 3

Guruji Photo 4

Guruji Photo 5

Guruji Photo 7

Guruji Photo 8

Guruji Photo 9

Guruji Photo 6

Guruji Photo 10

ನಮ್ಮ ಪಠ್ಯಕ್ರಮಗಳು

SSY ಮೂಲ ಕೋರ್ಸ್

ಪ್ರಾಣಿಕ ಶ್ವಾಸೋಚ್ಛ್ವಾಸ, ಸಮಾಧಿ ಧ್ಯಾನ ಮತ್ತು ಸಾತ್ವಿಕ ಆಹಾರದ ಮೂಲಕ ಆರೋಗ್ಯವಂತ ಜೀವನಕ್ಕಾಗಿ ಮೂಲಭೂತ ತರಬೇತಿ.

ಆಡ್ವಾನ್ಸ್ ಮೆಡಿಟೇಶನ್ ಕೋರ್ಸ್ (AMC)

ಧ್ಯಾನ ಅಭ್ಯಾಸವನ್ನು ಆಳಗೊಳಿಸಲು ಮತ್ತು ಆಂತರಿಕ ಶಾಂತಿ ಗಳಿಸಲು ಐದು ದಿನಗಳ ತೀವ್ರ ತರಬೇತಿ.

ಭವ ಸಮಾಧಿ ತರಬೇತಿ (BST)

ಭಾವನೆಗಳನ್ನು ಅಲಿಂಗಿಸುವ, ಸತ್ಯವನ್ನು ಅರಿಯುವ ಮತ್ತು ಅನುಭವದ ಮೂಲಕ ಚಿಂತನೆಗೆ ಹೊಸ ದೃಷ್ಟಿಕೋನ ನೀಡುವ ಕಾರ್ಯಕ್ರಮ.

ಇನ್ಫಂಟ್ ಸಿದ್ಧ ಕಾರ್ಯಕ್ರಮ (ISP)

ಹೋಲಿಸ್ಟಿಕ್ ಬೆಳವಣಿಗೆಗಾಗಿ ಪೋಷಕರು ಮತ್ತು ಪಾಲಕರಿಗೆ ಬೋಧನಾ ತಂತ್ರಗಳನ್ನು ಕಲಿಸುವ ತರಬೇತಿ.

ಶಿಕ್ಷಕರ ತರಬೇತಿ ಕೋರ್ಸ್ (TTC)

SSY ಶಿಕ್ಷಕರಾಗಿ ತರಬೇತಿಯನ್ನು ಪಡೆದು SSY ದರ್ಶನವನ್ನು ಜಗತ್ತಿನಾದ್ಯಾಂತ ಹರಡುವ ಕೋರ್ಸ್.

ಗುರುಜಿಯ ಸ್ಮರಣೀಯ ಕ್ಷಣಗಳು

Rishi Prabhakar Guruji

ಗುರುಪೂಜೆ

Rishi Prabhakar Guruji

ಗುರುಜಿಯ ಪ್ರವಚನ ಸಂದರ್ಭದಲ್ಲಿ

Rishi Prabhakar Guruji

ಧ್ಯಾನದ ಸಮಯದಲ್ಲಿ ಗುರುಜಿ

Rishi Prabhakar Guruji

ಋಷಿ ಪ್ರಭಾಕರ್ ಅವರು ತಮ್ಮ ತಾಯಿ ರಾಮಾದೇವಿ ಅಮ್ಮ ಜೊತೆ

Rishi Prabhakar Guruji

ಶಿಬಿರದ ದರ್ಶನ

Rishi Prabhakar Guruji

ಗುರುಜಿ ಋಷಿ ಪ್ರಭಾಕರ್

Rishi Prabhakar Guruji

Rishi Prabhakar Guruji

Rishi Prabhakar Guruji

Rishi Prabhakar Guruji

ಸಿದ್ಧ ಸಮಾಧಿ ಯೋಗ – ಗುರುಜಿಯ ಭಾಷಣ

SSY ಕಾರ್ಯಕ್ರಮದ ವೀಕ್ಷಣೆಗೆ ಈ ವಿಡಿಯೋ ನೋಡಿ

ಗುರುಜಿಯ ಮತ್ತೊಂದು ಭಾಷಣ

ಆಧ್ಯಾತ್ಮದ ಸಂದೇಶ

ಗುರುಜಿಯ ಮತ್ತೊಂದು ಭಾಷಣ

ಗುರು ಮಂತ್ರ

ಧರ್ಮ ಎಂದರೇನು?

ಪಂಚಕೋಷಗಳು

Annamaya Kosha

ಅನ್ನಮಯ ಕೋಶ

ಎಲ್ಲಾ ಹಂತದ ಕಲ್ಮಶಗಳು ಕೊನೆಗೆ ದೇಹದ ಮಟ್ಟದಲ್ಲಿ ಕಾಯಿಲೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.

Pranamaya Kosha

ಪ್ರಾಣಮಯ ಕೋಶ

ಜೀವನದ ಸಹಜ ಸ್ಫೂರ್ತಿಯ ದ್ರವ್ಯ, ಇದು ಇಲ್ಲದಿದ್ದರೆ ಕಾಯಿಲೆಯ ಅನುಭವ, ಯಾವುದೇ ಕಾಯಿಲೆ ಮೊದಲು ಪ್ರಾಣಮಯ ಕೋಶದಲ್ಲಿ ವ್ಯಕ್ತವಾಗುತ್ತದೆ.

Manomaya Kosha

ಮನೋಮಯ ಕೋಶ

ಎಲ್ಲವೂ ಯೋಚನೆಗಳ ಪರಿಣಾಮವೇ. ನಾವು ಏನು ಯೋಚಿಸುತ್ತೇವೆಯೋ ಅದೇ ಆಗುತ್ತದೆ.

Vijnanamaya Kosha

ವಿಜ್ಞಾನಮಯ ಕೋಶ

ಇದು ಮನಸ್ಸಿಗಿಂತ ಸೂಕ್ಷ್ಮವಾದುದು. ಇದು ನಮ್ಮನ್ನು ಸಬಲೀಕರಿಸುವ ಅಂಶಗಳನ್ನು ತಿಳಿಯುವ ಆಯಾಮ. ನಿಜವಾದ ಸತ್ಯದ ಗ್ರಹಿಕೆ. ಬಹಳಷ್ಟು ಮಂದಿ ತಮಗರಿವಿಲ್ಲದೆಯೇ ತಪ್ಪು ಜ್ಞಾನದಿಂದ ಜೀವಿಸುತ್ತಾ ತಮ್ಮನ್ನು ಹಾಗೂ ಇತರರನ್ನು ಬಂಧಿಗಳನ್ನಾಗಿಸಿಕೊಳ್ಳುತ್ತಾರೆ. ಉಳಿದ ಕೆಳಕೋಶಗಳನ್ನು ಈ ಕೋಶ ನಿಯಂತ್ರಿಸುತ್ತದೆ, ನಿಜವಾದ ಜ್ಞಾನದ ಅರಿವು ಅತ್ಯವಶ್ಯಕ.

Anandamaya Kosha

ಆನಂದಮಯ ಕೋಶ

ಅಹಂಕಾರರಹಿತ ಸ್ಥಿತಿ. ಎಲ್ಲಾ ಸಮಸ್ಯೆಗಳಿಗೂ ಅಹಂಕಾರವೇ ಮೂಲ. ತಾನು ಇತರರಿಗಿಂತ ಬೇರೆಯವನು ಹಾಗೂ ಉತ್ತಮ ಎಂದು ಭಾವಿಸುವುದರಿಂದ ಎಲ್ಲಾ ಸಮಸ್ಯೆಗಳು ಪ್ರಾರಂಭವಾಗುತ್ತವೆ.

ಸಿದ್ಧ ಸಮಾಧಿ ಯೋಗ – ಸಾಧಕರ ಅನುಭವ

ಮಹಾಂತೇಶ ಬೆಟಗೇರಿ

ಡಾ. ಅಭಿನಂದನ್ ಡೋರ್ಲೆ

ಶಿವಕುಮಾರ್ ಗೌಡ ಪಾಟೀಲ

ಗೋವಿಂದ ಗೌಡ ಪಾಟೀಲ

ಸವಿತಾ ಮತ್ತು ರಾಜಕುಮಾರ್ ಭದ್ರನ್ನವರ

ಗೋಪಾಲ್ ಸರ್ವಧೆ

ರಬಕವಿ ಸಿದ್ಧ ಸಮಾಧಿ ಯೋಗ ತರಗತಿಗಳ ಆರಂಭ

ಶ್ರೀ ಗುರುಸಿದ್ಧೇಶ್ವರ ಸ್ವಾಮಿಜಿ

ಶ್ರೀ ಅರುಣ ಜೀ ರಾ. ತಿಕೋಟಿಕರ

Anandamaya Kosha

ಶ್ರೀ ಅರುಣ ಜೀ ರಾ. ತಿಕೋಟಿಕರ, ಸಿದ್ಧ ಸಮಾಧಿ ಯೋಗ ಶಿಕ್ಷಕರು

Anandamaya Kosha

ಶ್ರೀ ಗುರುಸಿದ್ಧೇಶ್ವರ ಸ್ವಾಮಿಜಿಯಿಂದ ಶ್ರೀ ಅರುಣ್ ಗುರುಜಿ ಅವರಿಗೆ ಸನ್ಮಾನ

Rabkavi Venue Ready

ರಬಕವಿ ತರಗತಿಯ ಸ್ಥಳ ಸಿದ್ಧವಾಗಿದೆ

Rabkavi Class In Progress

ರಬಕವಿ ತರಗತಿ ಪ್ರಗತಿಯಲ್ಲಿ

ಸಂಪರ್ಕಿಸಿ

ಪ್ರಶ್ನೆಗಳಿಗಾಗಿ, ಕಾರ್ಯಕ್ರಮ ನೋಂದಣಿ ಅಥವಾ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ:

ವಿಳಾಸ: ಶ್ರೀ ಅರುಣ ಜೀ ರಾ. ತಿಕೋಟಿಕರ,

ಸಿದ್ಧ ಸಮಾಧಿ ಯೋಗ ಶಿಕ್ಷಕರು,

ಶ್ರೀ ಗುರುದೇವ ರಾನಡೆ ಮಾರ್ಗ,

ತಿಕೋಟಿಕರ ಗಲ್ಲಿ, ಜಮಖಂಡಿ - 587301

ಇಮೇಲ್: contact@ssy.org | arun_tikotekar@yahoo.co.in

ದೂರವಾಣಿ: 09448021458, 7760122100 (Only whatsapp)

ಈಗಲೇ ಸಂಪರ್ಕಿಸಿ

ಪದೇಪದೇ ಕೇಳುವ ಪ್ರಶ್ನೆಗಳು

SSY ಎಂದರೇನು?

SSY ಎಂದರೆ ಸಿದ್ಧ ಸಮಾಧಿ ಯೋಗ, ಇದು ವ್ಯಕ್ತಿತ್ವ ಪರಿವರ್ತನೆ ಮತ್ತು ಆತ್ಮಬೋಧನೆಗೆ ಸಹಾಯಕವಾದ ಹೋಲಿಸ್ಟಿಕ್ ವಿಧಾನ.

SSY ಕಾರ್ಯಕ್ರಮಗಳಲ್ಲಿ ಯಾರು ಭಾಗವಹಿಸಬಹುದು?

ವಯಸ್ಸು ಅಥವಾ ಹಿನ್ನೆಲೆಯೆನ್ನದೆ ಸ್ವಾಭಾವಿಕ ಬೆಳವಣಿಗೆಯಲ್ಲಿ ಆಸಕ್ತರು ಎಲ್ಲರೂ SSY ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ಕಾರ್ಯಕ್ರಮಕ್ಕೆ ಹೇಗೆ ನೋಂದಾಯಿಸಬಹುದು?

ನೀವು ನಮ್ಮ ವೆಬ್‌ಸೈಟ್ ಅಥವಾ ಇಮೇಲ್ ಅಥವಾ ದೂರವಾಣಿ ಮೂಲಕ ನೇರವಾಗಿ ಸಂಪರ್ಕಿಸಿ ನೋಂದಾಯಿಸಬಹುದು.

ಪಠ್ಯಕ್ರಮಗಳಿಗಾಗಿ ಯಾವುದೇ ಪೂರ್ವಅವಶ್ಯಕತೆಗಳಿವೆಯೆ?

ಯಾವುದೇ ನಿರ್ದಿಷ್ಟ ಪೂರ್ವಅವಶ್ಯಕತೆಗಳಿಲ್ಲ, ಆದರೆ ಕಲಿಯಲು ಮತ್ತು ಅಭ್ಯಾಸ ಮಾಡಲು ಉತ್ಸಾಹವಿರಬೇಕು.

ಹೆಚ್ಚಿನ ಮಾಹಿತಿಗೆ SSY ಅನ್ನು ಹೇಗೆ ಸಂಪರ್ಕಿಸಬಹುದು?

ಇಮೇಲ್ ಮೂಲಕ ssyknorth@gmail.com | arun_tikotekar@yahoo.co.in ಗೆ ಸಂಪರ್ಕಿಸಬಹುದು.